ಆರ್ಯವೈಶ್ಯ ಮಂಡಳಿಯ ವತಿಯಿಂದ ಆರ್ಯುವೇದ ವೈದ್ಯ ನೆಲ್ಲೂರು ಆನಂದಯ್ಯ ಔಷಧ ವಿತರಣೆ.
0 Comments । By Black Cat News । 8 August, 2021
ಗುಡಿಬಂಡೆ: ಆಂಧ್ರ ಮೂಲದ ಪ್ರಖ್ಯಾತ ಆರ್ಯುವೇದ ವೈದ್ಯ ನೆಲ್ಲೂರು ಆನಂದಯ್ಯ ರವರು ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ತಯಾರಿಸಿದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ವಾಸವಿ ಫೌಂಡೇಷನ್ ಹಾಗೂ ತಾಲ್ಲೂಕು ಆರ್ಯವೈಶ್ಯ ಮಂಡಳಿಯ ವತಿಯಿಂದ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ತಾಲ್ಲೂಕು ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ನಾಗರಾಜಯ್ಯಶೆಟ್ಟಿ ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆಗಳು ಬಂದಿದ್ದರೂ ಕೂಡ ಆನಂದಯ್ಯ ರವರ ಆರ್ಯುವೇದಿಕ್ ಔಷಧ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ವಾಸವಿ ಫೌಂಡೇಷನ್ ವತಿಯಿಂದ ಈ ನಾಟಿ ಔಷಧವನ್ನು ನೀಡಲಾಗುತ್ತಿದ್ದು, ಔಷಧಿ ಪಡೆದವರು ತೆಗೆದುಕೊಳ್ಳಬೇಕಾದ ಸೂಚನೆಗಳ ಬಗ್ಗೆ ತಿಳಿಸಲಾಗಿದೆ. ಕಡ್ಡಾಯವಾಗಿ ಸೂಚನೆಗಳನ್ನು ಪಾಲನೆ ಮಾಡಬೇಕಿದೆ ಎಂದರು.
ನಂತರ ಆರ್ಯವೈಶ್ಯ ಮಂಡಳಿಯ ಸಿ.ಎಸ್.ರಾಘವೇಂದ್ರ ಮಾತನಾಡಿ, ಪ್ರಖ್ಯಾತ ಆಯುರ್ವೇದ ವೈದ್ಯರಾದ ನೆಲ್ಲೂರು ಆನಂದಯ್ಯರವರಿಂದ ತಯಾರಿಸಲಾಗಿರುವ ರೋಗನಿರೋಧಕ ಮಾತ್ರೆ ವಾಸವಿ ಫೌಂಡೇಷನ್ ಹಾಗೂ ತಾಲ್ಲೂಕು ಆರ್ಯವೈಶ್ಯ ಮಂಡಳಿಯ ವತಿಯಿಂದ ನೀಡಲಾಗಿದೆ. ವಾಸವಿ ಫೌಂಡೇಷನ್ ವತಿಯಿಂದ ರಾಜ್ಯದಲ್ಲಿ ಸುಮಾರು ಕಡೆ ಈ ಔಷಧ ವಿತರಿಸಲಾಗುತ್ತಿದೆ. ಪ್ರಸ್ತುತ 1100 ಮಂದಿಗೆ ಈ ಔಷಧ ನೀಡಿದ್ದು, ಮುಂದಿನ ದಿನಗಳಲ್ಲಿ ಔಷಧಿ ವಿತರಣೆ ಮಾಡಲಾಗುತ್ತದೆ ಎಂದರು.
ಈ ವೇಳೆ ಆರ್ಯವೈಶ್ಯ ಮಂಡಳಿಯ ಪಿಗ್ಮಿ ನಾಗರಾಜ, ನವೀನ್, ಸುನೀಲ್, ಅನೀಲ್, ಹರೀಶ್, ಸಿ.ಆರ್.ಮಂಜುನಾಥ್, ಗುಪ್ತ, ಪ್ರಭು ಸ್ಟೋರ್ ಅನೀಲ್ ಸೇರಿದಂತೆ ಹಲವರು ಹಾಜರಿದ್ದರು.
Balaji R's Report
BlackCatNews, Chikkaballapur