ಗುಡಿಬಂಡೆಗೆ ವೀಕೆಂಡ್ ಟ್ರಿಪ್ ಪ್ಲಾನ್ ಮಾಡಿದ್ರಾ, ಹಾಗಾದ್ರೆ ದಂಡ ಕಟ್ಟೋಕೆ ರೆಡಿಯಾಗಿ.
0 Comments । By Black Cat News । 8 August, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ಒನ್ ಡೇ ಟ್ರಿಪ್ಗೆಂದೆ ಫೇಮಸ್ ಆಗಿರುವ ಗುಡಿಬಂಡೆ ಸುತ್ತಮುತ್ತಲಿನ ಪ್ರದೇಶಕ್ಕೆ ವಾರಾಂತ್ಯದ ದಿನಗಳಂದು ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿರುತ್ತಾರೆ. ಆದರೆ ಕೊರೋನಾ ೩ನೇ ಅಲೆಯ ಅಬ್ಬರ ಕಡಿಮೆ ಮಾಡಲು ತಾಲ್ಲೂಕು ಆಡಳಿಯ ಪ್ರವೇಶ ನಿಷೇಧಿಸಿದ್ದು, ದಂಡವನ್ನು ಸಹ ವಿಧಿಸಲಾಗುತ್ತದೆ ಎಂಬ ನೋಟಿಸ್ ಸಹ ಅಂಟಿಸಲಾಗಿದೆ.
ಕೊರೋನಾ ೨ನೇ ಹಂತದ ಲಾಕ್ಡೌನ್ ತೆರವಾದ ಬಳಿಕ ಗುಡಿಬಂಡೆಯ ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರವಾಸಿಗರ ದಂಡು ಬರಲಾರಂಭಿದೆ. ಇದರಿಂದ ಸ್ಥಳೀಯರಿಗೆ ಕೊರೋನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಇದನ್ನೆಲ್ಲಾ ಗಮನಿಸಿದ ತಾಲ್ಲೂಕು ಆಡಳಿತ ಗುಡಿಬಂಡೆ ಬೆಟ್ಟ, ಎಲ್ಲೋಡು ಬೆಟ್ಟ ಕ್ಕೆ ಪ್ರವೇಶವನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿ ಪ್ರವೇಶಿಸಿದರೇ ದಂಡವನ್ನು ಸಹ ವಿಧಿಸಲಾಗುತ್ತದೆ ಎಂಬ ನೋಟಿಸ್ ಅಂಟಿಸಿದ್ದು, ವಾಹನಗಳು ಪ್ರವೇಶಿಸಿದಂತೆ ಬ್ಯಾರಿಕೇಡ್ಗಳನ್ನು ಸಹ ಅಳವಡಿಸಿದ್ದಾರೆ.
ಇನ್ನೂ ಈ ಕುರಿತು ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಇತ್ತೀಚಿಗೆ ಗುಡಿಬಂಡೆ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಕ್ಕೆ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಿಂದ ಹಾಗೂ ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ ಹೀಗೆ ಅನೇಕ ರಾಜ್ಯಗಳಿಂದಲೂ ಸಹ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಸೋಂಕು ಹರಡಬಹುದೆಂಬ ಭಯ ಗುಡಿಬಂಡೆ ಜನತೆಯಲ್ಲಿದೆ. ಆದ್ದರಿಂದ ಪ್ರವಾಸಿಗರು ಯಾವುದೇ ಕಾರಣಕ್ಕೂ ಸೋಂಕು ಕಡಿಮೆಯಾಗುವವರೆಗೂ ಈ ಭಾಗಗಳಿಗೆ ಪ್ರವಾಸವನ್ನು ಕೈಗೊಳ್ಳಬಾರದೆಂದು ಸಲಹೆ ನೀಡಿದ್ದಾರೆ.
ಇನ್ನೂ ತಾಲ್ಲೂಕು ಆಡಳಿತದ ಈ ನಿಯಮದಿಂದ ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸ್ಸಾಗಿದ್ದು, ಸುಮಾರು ಕಿ.ಮೀ ಗಳ ದೂರದಿಂದ ನಾವು ಈ ಭಾಗಕ್ಕೆ ಪ್ರವಾಸಕ್ಕೆ ಬಂದಿದ್ದು, ಇದೀಗ ಈ ನಿಯಮದಿಂದ ನಿರಾಸೆಯಿಂದ ಹಿಂದೆ ಹೋಗಬೇಕಿದೆ. ಈಗಾಗಲೇ ನಂದಿ ಬೆಟ್ಟ, ಆವುಲ ಬೆಟ್ಟಕ್ಕೆ ವೀಕೆಂಡ್ ಗಳಲ್ಲಿ ಪ್ರವೇಶ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದೆವು. ಇಲ್ಲೂ ಸಹ ಇದೇ ನಿಯಮ ವಿರುವುದರಿಂದ ವಾಪಸ್ಸು ಹೋಗುತ್ತಿದ್ದೇವೆ ಎಂದು ಪ್ರವಾಸಿಗರು ನಿರಾಸೆಯ ನುಡಿಗಳನ್ನು ಆಡಿದ್ದಾರೆ.
Balaji R's Report
BlackCatNews, Chikkaballapur