ಮೈಸೂರಿನಲ್ಲಿ ನಾಲ್ಕು ವರ್ಷದ ಬಾಲಕನಿಗೆ ಮಿದುಳು ಜ್ವರ: ಸೃಷ್ಠಿಯಾಯಿತು ಆತಂಕ.
0 Comments । By Black Cat News । 13 August, 2021
ಮೈಸೂರು: ಕೆಲ್ಲಹಳ್ಳಿ ಗ್ರಾಮದಲ್ಲಿ
ನಾಲ್ಕು ವರ್ಷದ ಬಾಲಕನಿಗೆ ಮಿದುಳು ಜ್ವರ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ
ಎರಡು ವರ್ಷಗಳ ಹಿಂದೆ ಜಪಾನೀಸ್ ಬಿ ಎನ್‌ಕೆಫಾಲೆಟಿಸ್ (ಮಿದುಳು) ಜ್ವರವು ಜಿಲ್ಲೆಯಲ್ಲಿ ಪತ್ತೆಯಾಗಿತ್ತು.
ಮಿದುಳು ಜ್ವರದಿಂದಾಗಿ ತೀವ್ರ
ಅಸ್ವಸ್ಥನಾಗಿರುವ ಬಾಲಕನನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾವಹಿಸಲಾಗಿದೆ. ಮಿದುಳು
ಜ್ವರ ಪ್ರಕರಣ ಪತ್ತೆಯಾದ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಇತ್ತೀಚೆಗೆ ಜ್ವರ ಪ್ರಕರಣಗಳು ಕಂಡುಬಂದವರ ರಕ್ತ ಮಾದರಿಗಳನ್ನು ಪಡೆದು ಪರೀಕ್ಷೆಗೆ ರವಾನಿಸಲಾಗಿದೆ.
ವರದಿಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ಸೊಳ್ಳೆಯಿಂದ ಹರಡುವ ರೋಗ ಇದಾಗಿದೆ. ಜಿಲ್ಲೆಯಲ್ಲಿ
ಈ ವರ್ಷ ಒಟ್ಟು 22 ಮಿದುಳು ಜ್ವರ ಪ್ರಕರಣಗಳು ಪತ್ತೆಯಾಗಿವೆ. ಕೆಲ್ಲಹಳ್ಳಿಯಲ್ಲಿ ಬಾಲಕನಿಗೆ ಜಪಾನೀಸ್
ಬಿ ಎನ್‌ಕೆಫಾಲೆಟಿಸ್ ಕಂಡುಬಂದಿದೆ. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ವತಿಯಿಂದ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
PUNEETH CG's Report
BlackCatNews, Mysore