×
Login

ಕೊರೋನಾ ಸೋಂಕು ಮರೆತು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಖರೀದಿಗೆ ಮುಗಿಬಿದ್ದ ಜನತೆ .

0 Comments । By Black Cat News । 19 August, 2021

ಕೊರೋನಾ ಸೋಂಕು ಮರೆತು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಖರೀದಿಗೆ ಮುಗಿಬಿದ್ದ ಜನತೆ

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಜೋರಾಗಿದ್ದು, ಕೊರೋನಾ ಸೋಂಕಿನ ಭಯವಿಲ್ಲದೇ ಮಾಸ್ಕ್, ಸಾಮಾಜಿಕ ಅಂತರ ಮರೆತು ಹಬ್ಬದ ವಸ್ತುಗಳ ಖರೀದಿಗೆ ಜನತೆ ಮುಗಿಬಿದ್ದಿದ್ದರು.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ಸೋಂಕು ಮೊದಲನೇ ಅಲೆಗಿಂತ ಎರಡನೇ ಅಲೆ ಕೆಟ್ಟ ಪರಿಣಾಮ ಬೀರಿತ್ತು. ಎರಡನೇ ಅಲೆಯಲ್ಲಂತೂ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು, ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇದೀಗ ಮೂರನೇ ಅಲೆಯ ಸೂಚನೆ ಈಗಾಗಲೇ ಸಿಕ್ಕಿದ್ದು, ಸಾರ್ವಜನಿಕರು ಮಾತ್ರ ಈ ಕುರಿತು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಅಧಿಕಾರಿಗಳು ಸಹ ಅರಿವು ಮೂಡಿಸುತ್ತಿಲ್ಲ.

ಇನ್ನೂ ಕೊರೋನಾ ಭಯವಿಲ್ಲವೇ ಎಂದು ಸಾರ್ವಜನಿಕರನ್ನು ಕೇಳಿದಾಗ, ಅವರು ಹೇಳಿದ್ದು ಒಂದೇ, ಅದೇನೂ ಸ್ವಾಮಿ ಕೊರೋನಾ ಸೋಂಕು ಸಾರ್ವಜನಿಕರಿಗೆ ಮಾತ್ರ ತಗಲುತ್ತದೆಯೇ, ದೊಡ್ಡ ದೊಡ್ಡ ಮಟ್ಟದಲ್ಲಿ ರಾಜಕೀಯ ಸಮಾವೇಶಗಳನ್ನು ಮಾಡುವವರಿಗೆ ತಗುಲುವುದಿಲ್ಲವೇ, ಎಲ್ಲಾ ಪಕ್ಷಗಳು ಕೊರೋನಾ ಸೋಂಕಿನ ಭಯವಿಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಮಾತ್ರ ಕೊರೋನಾ ರೂಲ್ಸ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಷ ವ್ಯಕ್ತಪಡಿಸಿದರು.

Balaji R's Report
BlackCatNews, Chikkaballapur



#

Also Read

×