×
Login

ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ನ್ಯಾಯಾಲಯದಿಂದ ಕಠಿಣ ಸಜೆ.

0 Comments । By Black Cat News । 22 August, 2021

ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ನ್ಯಾಯಾಲಯದಿಂದ ಕಠಿಣ ಸಜೆ

ಮೈಸೂರು: ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ನಗರದ ನ್ಯಾಯಾಲಯ 10 ವರ್ಷ ಕಠಿಣ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಈತನಿಗೆ ಆಶ್ರಯ ನೀಡಿ ಬಾಲಕಿ ಮೇಲೆ ಹಲ್ಲೆ ನಡೆಸಲು ಸಹಕರಿಸಿದ್ದ ಮಹಿಳೆಗೆ 4 ಸಾವಿರ ರೂ. ದಂಡ ವಿಧಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕು ಬೆಕ್ಯಾ ಗ್ರಾಮದ ಬಿ.ಡಿ.ಮಂಜು ಹಾಗೂ ವಿಮಲಾ ಶಿಕ್ಷೆಗೆ ಒಳಗಾದವರು.

ಮಂಜು ಹುಣಸೂರಿನ ಕಾರ್ತಿಕ್ ಎಂಬವರ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿ ಎದುರಿನಿಂದಲೇ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಆಕೆಗೆ ಜ್ಯೂಸ್ ಮತ್ತು ತಿಂಡಿ ಕೊಡುತ್ತ ಪ್ರೀತಿಯ ನಾಟಕವಾಡಿದ್ದ. 2018ರ ನ.14ರಂದು ಬಾಲಕಿಯನ್ನು ಹುಣಸೂರಿನಿಂದ ಅಪಹರಿಸಿ ಬೆಕ್ಯಾ ಗ್ರಾಮದ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ಯಾಮಾ ಕಮ್ರೋಜ್ ಅವರು ಮಂಜು ಹಾಗೂ ವಿಮಲಾಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ಸಂತ್ರಸ್ತೆಗೆ 25 ಸಾವಿರ ರೂ. ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಎಸ್.ಪುಷ್ಪಲತಾ ವಾದ ಮಂಡಿಸಿದ್ದರು.

PUNEETH CG's Report
BlackCatNews, Mysore



#

Also Read

×