ವರಾಹಗಿರಿ ಬೆಟ್ಟದ ಅಭಿವೃದ್ದಿಯೇ ನಮ್ಮ ಗುರಿ: ಗಾಯತ್ರಿ ನಂಜುಂಡಪ್ಪ.
0 Comments । By Black Cat News । 30 August, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ಐತಿಹಾಸಿಕ ಹಿನ್ನೆಲೆಯುಳ್ಳ ತಾಲೂಕಿನ ವರ್ಲಕೊಂಡ ಬಳಿಯಿರುವ ವರಾಹಗಿರಿ ಬೆಟ್ಟವನ್ನು ಪ್ರವಾಸಿತಾಣವನ್ನಾಗಿ ಅಭಿವೃದ್ದಿ ಮಾಡುವುದೇ ನಮ್ಮ ಗುರಿ ಎಂದು ವರಾಹಗಿರಿ ಬೆಟ್ಟದ ಟ್ರಸ್ಟ್ನ ಗೌರವಾಧ್ಯಕ್ಷೆ ಗಾಯತ್ರ ನಂಜುಂಡಪ್ಪ ತಿಳಿಸಿದರು.
ಈ ಕುರಿತು ತಾಲೂಕಿನ ಮುದ್ದರೆಡ್ಡಿಹಳ್ಳಿ ಗ್ರಾಮದ ಬಳಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ವರಾಹಗಿರಿ ಬೆಟ್ಟವನ್ನು ಜನತೆ ರಕ್ಷಿಸಿಕೊಂಡು ಬಂದಿದ್ದಾರೆ. ಇದೀಗ ಈ ಬೆಟ್ಟಕ್ಕೆ ಮತಷ್ಟು ರಕ್ಷಣೆ ಮಾಡಬೇಕಿದೆ. ಬೆಟ್ಟದ ಮೇಲೆ ಪುರಾತನ ರಾಮನ ದೇವಾಲಯವಿದ್ದು, ಇದನ್ನು ವೀಕ್ಷಣೆ ಮಾಡಲು ತೆರಳುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಬೆಟ್ಟ ಹತ್ತಲು ಮೆಟ್ಟಿಲುಗಳ ನಿರ್ಮಾಣ, ದೇವಾಲಯದ ಜೀರ್ಣೋದ್ದಾರ ಮಾಡಿ ಧಾರ್ಮಿಕ ಸ್ಥಳವನ್ನಾಗಿ ಮಾಡುವುದರ ಜೊತೆಗೆ ಪ್ರವಾಸಿ ತಾಣವನ್ನಾಗಿಯೂ ಸಹ ಮಾಡುವ ಮುಖ್ಯ ಗುರಿಯನ್ನು ನಮ್ಮ ಟ್ರಸ್ಟ್ ಹೊಂದಿದೆ. ಇನ್ನೂ ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮದಿಂದ ಒಬ್ಬರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡು ಎಲ್ಲರ ಸಹಕಾರದಿಂದ ಯಾವುದೇ ರಾಜಕೀಯ ಭೇದವಿಲ್ಲದೇ ಕೆಲಸ ಮಾಡಲಾಗುತ್ತದೆ ಎಂದರು.
ಈ ವೇಳೆ ಮುಖಂಡರಾದ ನಂಜುಂಡಪ್ಪ, ಪೆರೇಸಂದ್ರ ಚೆನ್ನಕೃಷ್ಣಾರೆಡ್ಡಿ, ಮದ್ದರೆಡ್ಡಿ, ಶಿವರಾಂ, ಅಶ್ವತ್ಥಪ್ಪ, ಬಾಬು ಸೇರಿದಂತೆ ಹಲವರು ಇದ್ದರು.
Balaji R's Report
BlackCatNews, Chikkaballapur