×
Login

ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣ-ರಾಧೆ ವೇಷ ಧರಿಸಿ ಕಳೆ ಹೆಚ್ಚಿಸಿದ ಪುಟಾಣಿ ಮಕ್ಕಳು.

0 Comments । By Black Cat News । 1 September, 2021

ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣ-ರಾಧೆ ವೇಷ ಧರಿಸಿ ಕಳೆ ಹೆಚ್ಚಿಸಿದ ಪುಟಾಣಿ ಮಕ್ಕಳು

ಚಿಕ್ಕಬಳ್ಳಾಪುರ (ಗುಡಿಬಂಡೆ): ಕೊರೋನಾ ಕರಿ ಛಾಯೆಯ ನಡುವೆಯೂ ಗುಡಿಬಂಡೆ ಪಟ್ಟಣದ ಜೈನರ ಬಸದಿಯಲ್ಲಿ  ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿತ್ತು. ಮನೆಮನೆಗಳಲ್ಲಿ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಸರಳವಾಗಿ ಜನ್ಮಾಷ್ಟಮಿ ಆಚರಿಸಲಾಯಿತು. ತಾಯಂದಿರು ತಮ್ಮ ಮಕ್ಕಳಿಗೆ ರಾಧೆ ಮತ್ತು ಗೋಪಿಕೆಯರ ವೇಷ ತೊಡಸಿದ್ದ ಪಾತ್ರ ಧಾರಿಗಳಾಗಿ ಕಂಗೊಳಿಸಿದರು.

ಪಟ್ಟಣದ ಜೈನರ ಬಸದಿಯಲ್ಲಿ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟ್ಟಣದ ವಿವಿಧ ವಾರ್ಡ್ ಗಳ ಮಕ್ಕಳು ರಾಧೆ, ಗೋಪಿಕೆ ಹಾಗೂ ಕೃಷ್ಣನ ಅವತಾರದಲ್ಲಿ ಗಮನ ಸೆಳೆದರು. ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನು ಭಕ್ತಿಭಾವದಿಂದ ಆಚರಿಸಿದರು. ಜೊತೆಗೆ ಹಾಡುಗಳ ಮೂಲಕ ಶ್ರೀಕೃಷ್ಣನ ನಾಮ ಸ್ಮರಣೆ ಮಾಡಿದರು.

ಕೊರೋನಾ ಸಂಕಷ್ಟ ಆದಷ್ಟು ಬೇಗ ತೊಲಗಲಿ. ಮೊದಲಿನಂತೆ ಹಬ್ಬ ಹರಿ ದಿನಗಳನ್ನು ಸಾಮೂಹಿಕವಾಗಿ, ವೈಭವಯುತವಾಗಿ ಆಚರಿಸುವಂತಾಗಿಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು. ವೇಳೆ ಗ್ರಾಮ ವಿಕಾಸ ಸಂಸ್ಥೆಯ ಶ್ರೀಧರ್ ಸಾಗರ್ ಜಿ, ಸಂಚಾಲಕರಾದ ಹರ್ಷಿತ, ಮುನಿರಾಜು, ಶಾಂಭವಿ, ದೀಪ್ತಿ, ಭಾರ್ಗವಿ, ಮಕ್ಕಳ ಪೋಷಕರು ಸೇರಿದಂತೆ ಇತರರು ಭಾಗವಹಿಸಿದ್ದರು.

Balaji R's Report
BlackCatNews, Chikkaballapur



#

Also Read

×