×
Login

300 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

0 Comments । By Black Cat News । 28 August, 2021

300 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್​​​ನಿಂದ ನಿರ್ಮಿಸಿರುವ 300 ಹಾಸಿಗೆಗಳ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ ಮತ್ತು ಮಕ್ಕಳ ತೀವ್ರ ನಿಗಾ ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಮ್ಮ ಕೈಯಾಲದ ಸಹಾಯ ಮಾಡುವ ಹೃದಯ ಇಟ್ಟುಕೊಳ್ಳಬೇಕು. ಸತ್ಯಸಾಯಿ ಗ್ರಾಮದಲ್ಲಿ ಸೇವಾ ಭಾವ ಎದ್ದು ಕಾಣುತ್ತಿದೆ. ಕಣ್ಣಿಗೆ ಕಾಣದ ದೇವರನ್ನು ಕಾಣುವ ವಾತವರಣ ಸತ್ಯಸಾಯಿ ಗ್ರಾಮದಲ್ಲಿದೆ. ಈ ಕಲಿಯುಗದಲ್ಲಿ ಗುರುವಿನ ಮೂಲಕ ದೇವರನ್ನು ಕಾಣಬಹುದಾಗಿದೆ. ಇಂದು ಅನೇಕರು ವಿದೇಶಗಳಿಂದ ಸತ್ಯಸಾಯಿ ಬಾಬ ಭಕ್ತರು ಬಂದು ಇಲ್ಲಿ ಸೇವೆ ಮಾಡೋಕೆ ಬಂದಿರೋದು ಇದಕ್ಕೆ ಸಾಕ್ಷಿ ಎಂದರು.

ಇನ್ನೂ ಮಧುಸೂದನ ಸ್ವಾಮೀಜಿಯವರ ಸಂಸ್ಥೆಯ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಇಚ್ಚೆಯನ್ನು ಹೊಂದಿದ್ದು, ಇದಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುತ್ತದೆ. ಇನ್ನೂ ಇಂತಹ ಸ್ಥಳದಲ್ಲಿ ಕಾಲೇಜು ನಿರ್ಮಾಣವಾದರೇ ಅನೇಕ ಬಡವರಿಗೆ ನೆರವಾಗಲಿದೆ. ಬೇರೆ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೂ ಇಂತಹ ಸೇವಾ ಮನೋಭಾವ ಇರುವ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ವ್ಯತ್ಯಾಸವಿದ್ದು, ಸೇವಾ ಮನೋಭಾವ ಹೊಂದುವ ವೈದ್ಯರು ಈ ಕಾಲೇಜಿನಿಂದ ಬರಲಿದ್ದಾರೆ ಎಂದರು.

ಈ ಸಮಯದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‍, ಸದ್ಗುತು ಶ್ರೀ ಮಧುಸೂದನ ಸಾಯಿ ಸ್ವಾಮಿಜಿ, ಸಂಸದ ಬಚ್ಚೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

Balaji R's Report
BlackCatNews, Chikkaballapur



#

Also Read

×