ಗುಡಿಬಂಡೆ ಆಸ್ಪತ್ರೆಯಲ್ಲಿ ಸೋಲಾರ್ ಚಾಲಿತ ರಕ್ತ ಶೇಖರಣಾ ಘಟಕ ಉದ್ಘಾಟನೆ.
0 Comments । By Black Cat News । 3 September, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಲಾರ್ ಚಾಲಿತ ರಕ್ತ ಶೇಖರಣಾ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಎಲ್ಲದಾನಗಳಿಗಿಂತ ಮಿಗಿಲಾದದು ರಕ್ತದಾನ, ತಾವು ನೀಡುವ ಒಂದು ಯೂನಿಟ್ ರಕ್ತ ಸಾವಿನ ಅಂಚಿನಲ್ಲಿರುವ ಅನೇಕರಿಗೆ ಪ್ರಾಣ ನೀಡುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯವಂತ ಯುವಕರು ರಕ್ತದಾನಕ್ಕೆ ಮುಂದಾಗಬೇಕು. ಈಗಾಗಲೇ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ೨ ವಿದ್ಯುತ್ ಚಾಲಿತ ರಕ್ತ ಶೇಖರಣ ಯಂತ್ರಗಳಿದ್ದವು. ಇದರ ಜೊತೆಗೆ ಸೋಲಾರ್ ಆಧಾರಿತ ರಕ್ತ ಶೇಖರಣಾ ಘಟಕ ಸರ್ಕಾರ ನೀಡಿರುವುದು ಮತಷ್ಟು ಅನುಕೂಲಕರವಾಗಿದೆ ಎಂದರು.
ನಂತರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಮಂಜುನಾಥ್ ಮಾತನಾಡಿ, ಸುಮಾರು ವರ್ಷಗಳ ಹಿಂದೆ ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತುಂಬಾ ಕಷ್ಟಕರವಾಗಿತ್ತು. ಇದೀಗ ತಾಲ್ಲೂಕು ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳಿಗೆ ಒಬ್ಬೊಬ್ಬ ವೈದ್ಯರಿದ್ದಾರೆ. ಬಡವರಿಂದ ಕೂಡಿದ ತಾಲೂಕಿನಲ್ಲಿ ಬಹುತೇಕ ಎಲ್ಲದಕ್ಕೂ ಚಿಕಿತ್ಸೆ ದೊರೆಯುತ್ತಿದೆ ಎಂದರು.
ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ಉಷಾ, ಆರೋಗ್ಯ ರಕ್ಷಾ ಸಮಿತಿಯ ಸಮಿಉಲ್ಲಾ, ಕೆ.ಟಿ.ನಂಜುಂಡಪ್ಪ, ಆಸ್ಪತ್ರೆಯ ಸಿಬ್ಬಂದಿಯಾದ ನಾಗರಾಜ್, ಶಿವಪ್ಪ ಸೇರಿದಂತೆ ಹಲವರು ಇದ್ದರು.
Balaji R's Report
BlackCatNews, Chikkaballapur