×
Login

ಅಮಾನಿ ಭೈರಸಾಗರ ಕೆರೆಯಂಗಳದ ಒಡ್ಡೆಮ್ಮ ದೇವಿಗೆ ರೈತರಿಂದ ಕುಂಭಾಭಿಷೇಕ.

0 Comments । By Black Cat News । 10 August, 2021

ಅಮಾನಿ ಭೈರಸಾಗರ ಕೆರೆಯಂಗಳದ ಒಡ್ಡೆಮ್ಮ ದೇವಿಗೆ ರೈತರಿಂದ ಕುಂಭಾಭಿಷೇಕ

ಚಿಕ್ಕಬಳ್ಳಾಪುರ ಗುಡಿಬಂಡೆ: ತಾಲ್ಲೂಕಿನ ಜನತೆಯ ಜೀವಜಲನಾಡಿ, ಏಕೈಕ ನೀರಿನ ಸೆಲೆ ಎನಿಸಿರುವ ಇಲ್ಲಿನ ಅಮಾನಿ ಭೈರಸಾಗರದ ಕೆರೆಯ ಒಡಲು ತಂಬಿ ಹರಿಯಲಿ, ಕಳದೊಂದು ದಶಕದಿಂದ ಮಾಯವಾಗಿರುವ ಭತ್ತದ ಪೈರು ಮತ್ತೇ ಕಾಣಿಸಿಕೊಳ್ಳಲಿ, ಈಗ ಕಾಡುತ್ತಿರುವ ಕೊರೋನಾ ಹೆಮ್ಮಾರಿ ತೊಲಗಲಿ, ಕವಿಯುತ್ತಿರುವ ಬರದ ಕಾರ್ಮೋಡ ಚದುರಿ ವರ್ಷಧಾರೆಯಾಗಲಿ, ವರುಣನ ಕೃಪೆಯಿಂದ ಕೃಷಿಕ್ಷೇತ್ರ ಪುನಶ್ಚೇತನಗೊಳ್ಳಲಿ ಎಂದೆಲ್ಲಾ ಪ್ರಾರ್ಥಿಸಿ ಕೆರೆಅಚ್ಚುಕಟ್ಟಿನ ರೈತರು ಹಾಗೂ ಸಾರ್ವಜನಿಕರು ಕೆರೆಯಂಗಳದ ಅಧಿದೇವತೆ ಒಡ್ಡೆಮ್ಮದೇವಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕುಂಭಾಭಿಷೇಕವನ್ನು ಸರಳವಾಗಿ ನೆರವೇರಿಸಿದರು.

ಸ್ವಸ್ತಿವಾಚನ, ಪುಣ್ಯಾಹ, ಮೂಲ ಶಿಲಾಮೂರ್ತಿಗಳಿಗೆ ಪಂಚಾಮೃತಾಭಿಷೇಕ ಜೊತೆಗೆ ನಮಕ, ಚಮಕ ಪಾರಾಯಣದೊಂದಿಗೆ  ಮೂಲ ಶಿಲಾಮೂರ್ತಿಗಳ ಸುತ್ತಾ ಕಟ್ಟೆ ನಿರ್ಮಿಸಿ, ಕೆರೆಯಲ್ಲಿ ಕೊಡಗಳ ಮೂಲಕ ಕೆರೆಯ ನೀರನ್ನು ತುಂಬಿಸಿಕೊಂಡು ರೈತರೇ ನಿಂತು ಕುಂಭಾಭಿಷೇಕ ನೆರವೇರಿಸಿದರು. ಕುಂಭಾಭಿಷೇಕದ ನಂತರ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ, ಮಹಾ ನೀರಾಜನ ನಡೆಸಲಾಯಿತು.

ಪಪಂ ಮಾಜಿ ಅಧ್ಯಕ್ಷರಾದ ದ್ವಾರಕಾನಾಥನಾಯ್ಡು,  ಮಾಜಿ ಸದಸ್ಯರಾದ ಎಂ.ಎನ್.ರಾಜಣ್ಣ,  ಒಡ್ಡೆಮ್ಮದೇವಿ ರೈತ ಭಕ್ತಮಂಡಳಿ ಮುಖಂಡರಾದ ನಾಮಗೊಂಡ್ಲು ಶಂಕರನಾರಾಯಣ್, ವೆಂಕಟೇಶ್, ಮಂಜುನಾಥ್, ಜಿ.ಎನ್.ಲಕ್ಷ್ಮೀಪತಿ,  ಗಜನಾಣ್ಯ ಸುಬ್ರಮಣ್ಯ, ಶಿವಪ್ಪ, ಕಂಡೆಕ್ಟರ್ ಸೀನಪ್ಪ,  ಸಾಯಿವಿದ್ಯಾನಿಕೇತನ್ ರಾಮಾಂಜಿ, ಅಶ್ವತ್ಥಪ್ಪ, ಸಾವಯವ ಕೃಷಿತಜ್ಞ ವಾಹಿನಿಸುರೇಶ್, ಬಿ.ಎಸ್.ಶ್ರೀನಾಥ್, ಚಂದ್ರಶೇಖರ್, ಎಳೆನೀರು ಸೀನಪ್ಪ, ವೇದಮೂರ್ತಿಗಳಾದ ಸ.ನ.ನಾಗೇಂದ್ರಭಟ್, ಸುಬ್ರಮಣ್ಯಶಾಸ್ತ್ರಿ, ಶ್ರೀಶಸಿಂಹಭಟ್,  ಮಂಜುನಾಥ ಭಾಗವತ್, ಗು.ನ.ನಾಗೇಂದ್ರಭಟ್, ರವೀಂದ್ರಭಟ್, ಶಂಕರ್‌ದೀಕ್ಷಿತ್  ಮೊದಲಾದವರು ಭಾಗವಹಿಸಿದ್ದರು.

Balaji R's Report
BlackCatNews, Chikkaballapur



#

Also Read

×