×
Login

ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಪಾರ: ದಿನಸಿ ಕಿಟ್ ವಿತರಣೆ ಮಾಡಿದ ಮುಖಂಡ ಭರತ್.

0 Comments । By Black Cat News । 19 August, 2021

ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಪಾರ: ದಿನಸಿ ಕಿಟ್ ವಿತರಣೆ ಮಾಡಿದ ಮುಖಂಡ ಭರತ್

ಚಿಕ್ಕಬಳ್ಳಾಪುರ (ಗುಡಿಬಂಡೆ):  ದಿನನಿತ್ಯ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅಪಾರವಾಗಿದ್ದು, ನಾವೆಲ್ಲರೂ ಅವರನ್ನು ಗೌರವದಿಂದ ಕಾಣಬೇಕೆಂದು ಕಾಂಗ್ರೇಸ್ ಯುವ ಮುಖಂಡ ಭರತ್ ತಿಳಿಸಿದರು.

ಪಟ್ಟಣ ಪಂಚಾಯತಿ ಮುಂಭಾಗ ಪೌರ ಕಾರ್ಮಿಕರಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದಿನಸಿ ಕಿಟ್ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಹಬ್ಬ ಹರಿದಿನಗಳನ್ನದೇ, ಪ್ರತಿನಿತ್ಯ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಲು ಮುಂದಿರುವವರೇ ಪೌರ ಕಾರ್ಮಿಕರು. ಅವರು ಇಲ್ಲದಿದ್ದರೇ ಪಟ್ಟಣದಲ್ಲಿ ಸ್ವಚ್ಚತೆ ಕಣ್ಮರೆಯಾಗುತ್ತದೆ. ಬಹುಮುಖ್ಯವಾಗಿ ಕೊರೋನಾ ಸಮಯದಲ್ಲಂತೂ ಕೊರೋನಾದ ಭಯವಿಲ್ಲದೇ ಪ್ರಾಣವನ್ನು ಲೆಕ್ಕಿಸದೇ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ನಾವೆಂದೂ ಮರೆಯಬಾರದು ಎಂದರು.

ನಂತರ ಯೂತ್ ಕಾಂಗ್ರೇಸ್ ಅಂಬರೀಶ್ ಮಾತನಾಡಿ, ಮುಖಂಡ ಭರತ್ ರವರು ಸುಮಾರು ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಇತ್ತೀಚಿಗಷ್ಟೆ ಅವರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಮತಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು.

ವೇಳೆ .ಪಂ. ಆರೋಗ್ಯ ನಿರೀಕ್ಷಕ ಶಿವಣ್ಣ, .ಪಂ. ಸದಸ್ಯರಾದ ವಿಕಾಸ್, ರಾಜೇಶ್, ಮುಖಂಡರಾದ ರಿಜ್ವಾನ್, ಫಯಾಜ್ ಸೇರಿದಂತೆ ಪೌರಕಾರ್ಮಿಕರು ಹಾಜರಿದ್ದರು.

Balaji R's Report
BlackCatNews, Chikkaballapur



#

Also Read

×