ಬೀಚಗಾನಹಳ್ಳಿ ಗ್ರಾಮದಲ್ಲಿ ವಿಶೇಷ ಚೇತನರ ಹೆಣ್ಣು ಮಕ್ಕಳ ಕಾರ್ಯಗಾರ.
0 Comments । By Black Cat News । 26 August, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಕರ್ನಾಟಕ ವಿಶೇಷ ಚೇತನರ ಸಂಸ್ಥೆ ವತಿಯಿಂದ ವಿಶೇಷಚೇತನ ಮಹಿಳೆಯರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಕಾರ್ಯಗಾರ ಹಾಗೂ ವಿಶೇಷ ಚೇತನ ಮಕ್ಕಳ ಮತ್ತು ಕೊರೋನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಕಿರಣ್ ನಾಯಕ್ ಮಾತನಾಡಿ, ಇಂದಿನ ಕಾರ್ಯಗಾರದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವಿಶೇಷ ಚೇತನರ ಹೆಣ್ಣು ಮಕ್ಕಳು ಭಾಗವಹಿಸದ್ದರು. ವಿಶೇಷ ಚೇತನರು ಕೊರೊನಾ ಮುಂಚೆ ಹಾಗೂ ನಂತರ ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ, ಆರೋಗ್ಯ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ, ಸರ್ಕಾರದ ಸಮಸ್ಯೆಗಳ ಬಗ್ಗೆ ಹಾಗೂ ಪಿಂಚಣಿ ಬಾರದೆ ಇದ್ದರೆ ವಿಶೇಷ ಚೇತನರನ್ನು ಯಾವ ರೀತಿ ನೋಡುತ್ತಾರೆಂಬ ಮಾಹಿತಿಯನ್ನು ಪಡೆಯಲಾಯಿತು ಎಂದರು.
ನಂತರ ಬೀಚಗಾನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಂಕರ್ ಮಾತಾನಾಡಿ, ವಿಶೇಷಚೇತನ ವೆಂಬುವುದು ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲ. ಸದೃಢ ಮನಸ್ಸನ್ನು ಇಟ್ಟುಕೊಂಡು ಏನಾದರೂ ಸಾಧಿಸಬಹುದು ಎಂಬುದನ್ನು ತಿಳಿಸಿ ಮನೋಸ್ಥೈರವನ್ನು ಬೆಳಸಲಾಯಿತು.
ಕಾರ್ಯಕ್ರಮದ
ನಂತರ ಸುಮಾರು ೧೦೦ ಜನ ವಿಶೇಷಚೇತನರಿಗೆ ಆಹಾರ
ಸಾಮಗ್ರಿಗಳು ಕಿಟ್ ಗಳು ಜೊತೆ ಕೂರೋನ ಮುಂಜಾಗ್ರತೆಯ ಚಿತ್ರಗಳು ಬಿತ್ತಿ ಪತ್ರಗಳು ಸಂಸ್ಥೆ ವತಿಯಿಂದ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜೀವಿಕ
ನಾರಾಯಣಸ್ವಾಮಿ, ಕೆ.ವಿ.ಎಸ್.ಸಂಸ್ಥೆಯ ಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯಂ,
ಉಪಾಧ್ಯಕ್ಷ ವೆಂಕಟಶಿವಪ್ಪ, ಮಹಿಳಾಸಂಚಾಲಕಿ ಮಮತ ಮತ್ತು ಮಂಜುನಾಥ, ವೆಂಕಟೇಶ, ಕೃಷ್ಣ ನಾಗಮಣಿ ಸೇರಿದಂತೆ ಇತರರು ಭಾಗವಹಿಸಿದ್ದರು.
Balaji R's Report
BlackCatNews, Chikkaballapur