ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳ ತರಬೇತಿ ಕಾರ್ಯಾಗಾರ.
0 Comments । By Black Cat News । 26 August, 2021
ಚಿಕ್ಕಬಳ್ಳಾಪುರ (ಗುಡಿಬಂಡೆ): ತಾಲ್ಲೂಕಿನ ಹಂಪಸಂದ್ರ, ಬೀಚಗಾನಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ರಚನೆ, ಉದ್ದೇಶಗಳು ಹಾಗೂ ಸಮಿತಿಯ ಅಗತ್ಯತೆಯ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಹಂಪಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷಯ್, ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿಯು ರಾಷ್ಟ್ರೀಯ ಗ್ರಾಮ ಆರೋಗ್ಯ ಅಭಿಯಾನ ಪರಿಚಯಿಸಿದ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿದೆ. ಈ ಸಮಿತಿಯ ಮೂಲಕ ಆರೋಗ್ಯ ಕಾರ್ಯಕ್ರಮಗಳು ಹಾಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸಮುದಾಯಕ್ಕೆ ಮಾಹಿತಿ ನೀಡುವುದು, ಗ್ರಾಮೀಣ ಭಾಗಗಳಲ್ಲಿ ಉತ್ತಮ ಆರೋಗ್ಯ ಸ್ಥಿತಿಯನ್ನು ಸಾಧಿಸಲು ಸಾಮೂಹಿಕ ಕ್ರಮ ಕೈಗೊಳ್ಳಲು ಸಮುದಾಯವನ್ನು ಶಕ್ತಗೊಳಿಸುವುದು ಸೇರಿದಂತೆ ಅನೇಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಈ ವೇಳೆ ಕಾರ್ಯಕ್ರಮ ಸಂಯೋಜಕ ನಯಾಜ್ಖಾನ್, ಆರೋಗ್ಯ ಇಲಾಖೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಮುಭಾರಕ್, ಆಶಾ ಮೇಲ್ವಿಚಾರಕಿ ವೀಣಾ, ಗ್ರಾ.ಪಂ. ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Balaji R's Report
BlackCatNews, Chikkaballapur